Panchataare- ಪಂಚ ತಾರೆ- C 2010 M B Shyamala
ಪಂಚ ತಾರೆ
ಮನ ಒಲಿಸಿ , ಮಿನುಗುತಿದೆ ಪಂಚತಾರೆ !
ಕಣ್ ತಣಿಸಿ, ಕಿವಿ ತಣಿಸಿ, ರಸ ಉಣಿಸಿ,
ಮನ ಒಲಿಸಿ , ಮಿನುಗುತಿದೆ ಪಂಚತಾರೆ !
ಮಾಟ ಮಾಟದ ನಿಲುವು, ನೋಟ ನೋಟಕೆ ತಂಪು,
ಬಣ್ಣ ಬಣ್ಣದ ರೂಪು, ಕಣ್ಣಿಗೆ ಬಲು ಇಂಪು !!
ನೋಡಿರಿ ಪಂಚತಾರೆ!
ಮನೆ ಮನದಿ ಹರಡಿರುವ ಇಂಪಿನಾ ದನಿ ಕೇಳಿ,
ಸಂತಸವನುಕ್ಕಿಸುವ ಪರಿಚಯದ ದನಿ ಕೇಳಿ
ಆಯಾಸವಡಗಿಸುವ ಸಾಂತ್ವನದ ನುಡಿ ಕೇಳಿ ಆಲಿಸಿರಿ ಪಂಚತಾರೆ!!
ರಸದೂಟ ಉಣ ಬಡಿಸಿ, ಸವಿ ಮಾತಲುಪಚರಿಸಿ,
ತನು ಮನವ ತಣಿಸುತ್ತ,
ಅನವರತ ಶ್ರಮಿಸುತ್ತ, ಬೆಳಗುತಿದೆ ಪಂಚತಾರೆ!!
ಎಲ್ಲರಿಗೂ ಬೇಕಾಗಿ, ಸುಖದಲ್ಲಿ ಜೊತೆಯಾಗಿ,
ಕಷ್ಟದಲ್ಲಿ ನೆರವಾಗಿ, ದುಃಖದಲ್ಲಿ ಪಾಲಾಗಿ,
ಮನೆ ತುಂಬಿ, ಮನ ತುಂಬಿ, ಸುಖ ತುಂಬಿ,
ಎದೆ ತುಂಬಿ ಹೊಳೆಯುತಿದೆ ಪಂಚತಾರೆ!!
0 Comments:
Post a Comment
<< Home