I AM , NATARAJ M B because I CARE

I am a US Qualified Registered Microbiologist-Medical Technologist, operating my own Clinical Lab. I have been an activist advocating consumer, civic, citizen's rights for Thirty plus years & a Frequent contributor to the letters to Editor.

Saturday, June 05, 2010

ಹಾರ, ತುರಾಯಿ, ಶಾಲು, ಲಕ್ಕೋಟೆ ಸಂಸ್ಕೃತಿಯಿಂದ ಜನ ಜೀವನ ಪಾಳು.

ಹಾರ, ತುರಾಯಿ, ಶಾಲು, ಲಕ್ಕೋಟೆ ಸಂಸ್ಕೃತಿಯಿಂದ ಜನ ಜೀವನ ಪಾಳು.






ಮಹಾಲಕ್ಷ್ಮಿ ಲೇ ಔಟಿನ ಹನುಮಂತನ ದೇವಸ್ಥಾನ ಬೆಂಗಳೂರಿಗೇ ಒಂದು ಜನಪ್ರಿಯ ಯಾತ್ರಾ ಸ್ಥಾನವಾಗಿತ್ತು.

ಬೆಂಗಳೂರು ದರ್ಶನ ಬಸ್ಸು ಗಳ ಪ್ರಥಮ ನಿಲ್ದಾಣವಾಗಿತ್ತು.

ಇಡೀ ಏಶಿಯಾದಲ್ಲೇ ಅತಿ ದೊಡ್ಡ ಮೂರ್ತಿ ಎಂದು ಪ್ರಸಿದ್ಧ ವಾಗಿ, ೨ ಕಿಮಿ ದೂರದಿಂದಲೂ ಎತ್ತಿ ಕಾಣುತ್ತಿದ್ದ ಸುಂದರವಾದ

ಬಹಿರಂಗ ದೇವಸ್ಥಾನವಾಗಿ, ನಿವಾಸಿಗಳಿಗೆ ಹೆಮ್ಮೆಯ ತಾಣವಾಗಿತ್ತು.

ಪ್ರತಿನಿತ್ಯ ೪, ೫ ಬಸ್ ತುಂಬಾ ಜನಗಳು ಬಂದು ದರ್ಶನ ಮಾಡಿ ಹೋಗುತ್ತಿದರು.



ಇಲ್ಲಿನ ನಿವಾಸಿಗಳು ಅನೇಕರು , ಹಿಂದೂಗಳೇ.

ಆದರೆ ನಮ್ಮ ಧರ್ಮ ಕೇವಲ ಆಚಾರಣಾ ಆಧಾರಿತ ಮತವಲ್ಲ.

ಪೂಜೆ, ಆಚರಣೆ, ವ್ರತ ,ವಿಧಿ ವಿಧಾನ ಆಚರಿಸಿದವ ಮಾತ್ರ ನಿಜವಾದ ಹಿಂದೂ ಎಂದು ನಂಬಿದವರಲ್ಲ .

ಹಿಂದೂ ಧರ್ಮ ಹೇಳುವುದೂ ಅದೇ

ಅದೊಂದು ದಿನ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಬದುಕಬೇಕಾದ ಜೀವನ ಪಥ- ಕ್ರಮ.

ಇಂತಹ ಉಜ್ವಲ ಅಚಲ ನಂಬಿಕೆಯೇ ಹಿಂದೂ ಧರ್ಮವನ್ನು ಸಾವಿರಾರು ವರ್ಷಗಳ ಪರಾಧೀನತೆಯಲ್ಲೂ ಜೀವಂತವಾಗಿ ಉಳಿಯುವಂತೆ ಮಾಡಿರುವುದು.

.

ಆದರೆ ಉತ್ತಮ ಧನಕೊಶಗಳಾದ ದೇವಸ್ಥಾನಗಳು ಈ ನಡುವೆ ವಾಣಿಜ್ಯ ಮಳಿಗೆಗಳಾಗಿ ಬಿಟ್ಟಿವೆ.

ಯಾವುದೇ ಮತ ಧರ್ಮ ಆಚರಣೆಗಳು ಜಾತ್ಯಾತೀತ, ಒಂದು ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ನಿತ್ಯ ಜೀವನವನ್ನು

ಅಸ್ಥವ್ಯಸ್ಥ ಮಾಡ ಕೂಡದು.ಅದೂ ಧನ ದಾಹಕ್ಕೊಸ್ಕರವಂತೂ ಖಂಡಿತ ಮಾಡಕೂಡದು.

ಕಾಲಕ್ರಮೇಣ ಇಲ್ಲಿ ಇನ್ನೂ ಅನೇಕ ದೇವಸ್ಥಾನಗಳು ಹುಟ್ಟಿಕೊಂಡು ಬಿಟ್ಟವು.

ಈಗ ಸುಮಾರು ೨೫ ದೇವಸ್ಥಾನಗಳು ೨ ಚದರ ಕಿಮಿಯಲ್ಲಿವೆ. ಸದ್ಯದಲ್ಲೇ ಇನ್ನೂ ೩,೪

ಹುಟ್ಟಿಕೊಳ್ಳುವ ವದಂತಿಗಳೂ ಇವೆ.

ಇದ್ದ ದೇವಸ್ಥಾನಗಳು ಕಣ್ಣು ಕೋರೈಸುವ ದೀಪ, ಧೂಪ, ಬಣ್ಣ, ಸದ್ದು, ಗದ್ದಲಗಳಿಂದ ಪುಣ್ಯಾರ್ಥಿಗಳನ್ನು

ಆಕರ್ಷಿಸಿಕೊಂಡು ಹಣಗಳಿಕೆಯಲ್ಲಿ ಮುನ್ನಡೆದಾಗ ಈ ದೇವಸ್ಥಾನದ ಟ್ರಸ್ ಟಿಗೂ ಆತಂಕ ಭಯಗಳುನ್ಟಾಗಿ

ಹೊಸ ಹೊಸ ಧನಾಕರ್ಷಣಾ ವಿಧಗಳನ್ನು ಪರಿಷ್ಕರಿಸ ಬೇಕಾಗಿ ಈ ಕಾನೂನು ಬಾಹಿರ ಕ್ರಮಗಳನ್ನು ಅನುಸರಿಸುತ್ತಿದ್ದಾರೆ.





ಇದ್ದಕ್ಕಿದ್ದ ಹಾಗೆ ದೇವಸ್ಥಾನಗಳ ಹಠಾತ್ ಜನಪ್ರಿಯತೆ ಕಾರಣ ಎಲ್ಲರಿಗೂ ತಿಳಿದೇ ಇರುವ ಸಾರ್ವಜನಿಕ ರಹಸ್ಯ.

ಅವುಗಳು ಒಳ್ಳೆ ಧನಕೊಶಗಳು.

ಇಸ್ಕಾನ್ ನಂತಹ ಹೈ ಟೆಕ್ ದೇವಸ್ಥಾನಗಳು ಬಂದು ಸ್ಪರ್ಧೆ ತೀವ್ರ ಗೊಂಡು, ಹನುಮಂತನ ಮೇಲೆ ವಾಣಿಜ್ಯ ಪೈಪೋಟಿ ಹೇರಿಬಿಟ್ಟಿತು.

ಇಸ್ಕಾನ್ ಆದರೋ ಅವರ ಸ್ವಂತ ಆಸ್ತಿಯಲ್ಲಿ ಪೈಪೋಟಿ ನಡೆಸುತ್ತಿದ್ದಾರೆ.

ಈ ಸ್ಪರ್ಧೆಯಲ್ಲಿ ಗೆಲ್ಲುವುದು ಹೇಗೆ?

ಹೊರಗಿನಿಂದಲೇ ನಮಸ್ಕರಿಸಿ ಹೋಗುತ್ತಿದ್ದವರನ್ನು ಒಳಗೆ ಬಂದು ದಕ್ಷಿಣೆ ಹಾಕಿದರೆ ಮಾತ್ರ ದರ್ಶನ ಆಗುವಂತೆ ಹನುಮಂತನನ್ನು

ಗೋಡೆ , ಮಳಿಗೆಗಳ ಮಧ್ಯೆ ಹಿಂಸಾಗೃಹದಲ್ಲಿ ಕೂಡಿ ಹಾಕುವುದು!

ಈಗಿನ TV ಚ್ಯನ್ನಲ್ಗಳ ಪೆ ಪರ್ ವ್ಯೂ ( PAY PER VIEW) ನೋಡಿದಷ್ಟು ಶುಲ್ಕ ಕೊಡುವ ವ್ಯವಸ್ಥೆ ಯಂತೆ .

ಈಗ ಅವರು ಮಾಡುತ್ತಿರುವುದೂ ಇದೇ..









ಸಾರ್ವಜನಿಕ ಜಾಗ, ಬಿ ಬಿ ಎಂ ಪಿ ಕಾಯದೆಗಳನ್ನು ಅತಿಕ್ರಮಿಸಿ, ತಮ್ಮ ಇಚ್ಚಾನುಸಾರ ಕಟ್ಟಡ ಕಟ್ಟಿಕೊಂಡು ಧಾರ್ಮಿಕ ವಾಣಿಜ್ಯ ಪೈಪೋಟಿಯಲ್ಲಿ ಮುನ್ನಡೆಯೇ ಧ್ಯೇಯವಾಗಿರುವಂತಿದೆ .

ಇದರಿಂದ ನಿವಾಸಿಗಳ ಪ್ರಜೆಗಳ ಮೂಲಭೂತ ಹಕ್ಕುಗಳ ಉಲ್ಲಂಘನೆ ಆದರೇನಂತೆ?

ಕಾಯ್ದೆ ಬದ್ಧ, ನಿಷ್ಠ ಕಾರ್ಯ ನಿರ್ವಹಿಸಲು ಸಿದ್ಧರಿರುವ ಆಡಳಿತ ಅಧಿಕಾರಿಗಳಿದ್ದ ರೇನಂತೆ?

ಹಾರ, ತುರಾಯಿ, ಶಾಲು, ಲಕ್ಕೋಟೆ, ಸಂಸ್ಕೃತಿಯ ರಾಜಕಾರಣಿಗಳು, ಪ್ರಜಾ ಪ್ರ ತಿನಿಧಿಗಳಿರುವ ತನಕ?

ಎಮ್ಮ ಪೊರೆಯಲು ಸರ್ವಜ್ಞ?

ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಸೇವೆಯ ಸೋಗಿನಲ್ಲಿ ಧನ ಧಂದೆ.



ಅದಕ್ಕೆ ಬಲಿಯಾದವರು, ಆಗುತ್ತಿರುವವರು, ಸುತ್ತಮುತ್ತಲಿರುವ ನಿವಾಸಿಗಳು. (ಚಿತ್ರಗಳನ್ನು ನೋಡಿ)

ಇದು ಬೆಂಗಳೂರಿನ ಮಹಾಲಕ್ಷ್ಮಿ ಲೇ ಔಟಿನ ಕಥೆಯೊಂದೆ ಅಲ್ಲ. ಎಲ್ಲಾ ದೇವಸ್ಥಾನಗಳ ಅಕ್ಕಪಕ್ಕದವರ

ದಾರುಣ ಕಥೆ.

ಅಧಿಕಾರಿಗಳಲ್ಲಿ, ರಾಜಕಾರಣಿಗಳಲ್ಲಿ ಅಕ್ಕ ಪಕ್ಕ ನಿವಾಸಿ ಅನ್ನುವ ಕುರಿಗಳ ಆಕ್ರೋಶ ಪೂರ್ವಕ ಮನವಿ.

ನಿಮ್ಮ ಕೈಯಲ್ಲಿ ಇನ್ನೇನು ಆಗದಿದ್ದರೂ , ದಯವಿಟ್ಟು ಕಾನೂನನ್ನು, ಪ್ರಜೆಗಳನ್ನೂ ಯಾರೋ ಕೆಲವು ಸ್ವಹಿತಾಸಕ್ತರ ಧನ ದಾಹಕ್ಕೆ ಬಲಿ ಕೊ ಡ ಬೇಡಿ.

0 Comments:

Post a Comment

<< Home