I AM , NATARAJ M B because I CARE

I am a US Qualified Registered Microbiologist-Medical Technologist, operating my own Clinical Lab. I have been an activist advocating consumer, civic, citizen's rights for Thirty plus years & a Frequent contributor to the letters to Editor.

Thursday, May 06, 2010

ಶಬ್ಧಾಸುರರ , ವಾಹನಸುರರ ಕ್ರೌರ್ಯ:ನಮ್ಮೆಲ್ಲರನ್ನೂ ಉಳಿಸಿ 5 may 2010

೫ ಮೇ ೨೦೧೦
ಈ ಕೆಳಕಂಡ ವಿಷಯದಲ್ಲಿ ಪ್ರಭಾವ ಬೀರಬಲ್ಲ ಶಕ್ತಿ ಮತ್ತು ಅಧಿಕಾರವಿರುವ ಮಾನ್ಯರೆ,

ನಮ್ಮೆಲ್ಲರಂತೆ ನೀವೂ ಈ ಶಬ್ಧಾಸುರರ , ವಾಹನಸುರರ ಕ್ರೌರ್ಯಕ್ಕೆ ೨೪/೭ ಯಗ್ನಪಶುಗಳಾಗಿ
ಆಹುತಿಯಾಗುತ್ತಿದ್ದೀರಿ.


ಆದರೆ ನಿಮಗೆಲ್ಲರಿಗೂ ಇದನ್ನು ತತ್ಕ್ಷಣ ಬದಲಾಯಿಸುವ ಸಾಮರ್ಥ್ಯವಿರುವುದರಿಂದ ನಿಮ್ಮನ್ನೂ ಪಾರುಗಳಿಸಿಕೊಂಡು , ನಮ್ಮೆಲ್ಲರನ್ನೂ (೧೦೦ ಜನಗಳಿಗೆ ಕೇವಲ ೫ ದೇ ವಾಹನ ಉಪಯೋಗಕರಿರುವಾಗ ) ಉಳಿಸಿರಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

೧) ಹಾರ್ನ್ ಗದ್ದಲ: ಬೆಂಗಳೂರಿನಲ್ಲಿ ಪ್ರತಿನಿತ್ಯ ೮೦೦ ವಾಹನಗಳು ರಸ್ತೆ ಎಂಬ ಯುದ್ಧಭೂಮಿಗೆ ಇಳಿಯುತ್ತಿವೆ.
ನನ್ನ ೨೦೦೬ ರ ಮನವಿಯಿಂದ ಈಗಿನತನಕ ಸುಮಾರು ೮ ಲಕ್ಷ ವಾಹನಗಳು ಹೆಚ್ಚಾಗಿ ಸುಮಾರು ೩ ಮಿಲ್ಲ್ಯನ್
೪೫೦೦ ಕಿಲೋ ಮೀಟರ್ ರಸ್ತೆಯಲ್ಲಿ ತುಂಬಿಕೊಂಡಿವೆ. ಅಂದರೆ ಪ್ರತಿ ಕಿಲೋಮೀಟರಿಗೆ ಸುಮಾರು ೭೦೦ ವಾಹನಗಳಾಗುತ್ತವೆ. ಇವು ಪ್ರತಿನಿತ್ಯ ನಮ್ಮ ಪರಿಸರಕ್ಕೆ ೧೫೦೦ ಟನ್ ವಿಷಾನಿಲಗಳನ್ನು ಉಗುಳಿ ನಮ್ಮೆಲ್ಲರ ಆರೋಗ್ಯ ಹಾನಿ ಮಾಡುತ್ತಿವೆ. ಬೆಂಗಳೂರಿನ ಪ್ರತಿ ಚದರ ಕಿ.ಮಿ. ೨೩೦೦೦ ಜನದಟ್ಟಣೆಯಿಂದ ಒಂದೇ ಒಂದು ಹಾಂಕ್ ನಿಂದ 16000 ನಿರಪರಾಧಿ ಕಿವಿಗಳು ನೊಂದುತ್ತವೆ. ಮತ್ತು ಈ ಬಗೆಯ ಶಭ್ದ ಮಾಲಿನ್ಯದ ಇತರ
ಕಿವುಡು, ತಲೆ ಶೂಲೆ, ಕೋಪ, ತಾಪ ರಸ್ತೆ ಕ್ರೋಧ, ತಳಮಳ, ರಕ್ತ ಒತ್ತಡ ಮತ್ತು ಇರುವ ಖಾಯಿಲೆಗಳ ಉಲ್ಬಣ, ಮತ್ತಿತರ
ರೋಗಗಳಿಗೆ ತುತ್ತಾಗುತ್ತಾರೆ. ಶಬ್ದ ವೇದನೆಯಿಂದ ಬಂದ ಕಿವುದಿಗೆ ಮದ್ದೇ ಇಲ್ಲ.

ಶಬ್ದ ಮಾಲಿನ್ಯಕ್ಕೆ ಮುಖ್ಯ ಕಾರಣ ಅನಾವಶ್ಯಕ ಹಾರನ್ ಬಳಕೆ, ಮತ್ತು ವಿವಿಧ ಹಾನಿಕಾರಕ ಏರ್,ಮ್ಯೂಸಿಕಲ್, ಹಾರನ್ ಹಾಗು
ಕಾನೂನು ಬಾಹಿರ ಸೈಲೆಂಸರ್ಗಳ ಅಳವಡಿಕೆ.
ಅತಿ ಹಾರನ್ ಬಳಕೆ ಸುರಕ್ಷಿತ ಚಾಲಕನ ಸಂಕೇತ, ಅಪಘಾತ ತಡೆಗಟ್ಟುವ ಏಕೈಕ ಮಾರ್ಗ ಎಂಬ ತಪ್ಪು ಆಧಾರ ರಹಿತ ಕಲ್ಪನೆಯೂ ನಮ್ಮ ಹೋದ್ರೆ ಹೋಗಲಿ ಬಿಡು ಎನ್ನುವ ಧೋರಣೆಗೆ ಕಾರಣ.
ರಸ್ತೆಗಳಲ್ಲಿ ಈಗಿರುವ ಚಾಲಕರನ್ನು ನೋಡಿದರೆ ಇದು ಬೇಜವಾಬ್ದಾರಿ ಚಾಲಕತನವನ್ನು, ನಾನೇ ರಸ್ತೆ ರಾಜ ಎಂಬ ಧೋರಣೆ ಯನ್ನು ಎತ್ತಿಹಿಡಿಯುತ್ತದೆ.
ತಮಗೇ ಗೊತ್ತಿರುವಂತೆ ಅನೇಕ ಸಂಘ ಸಂಸ್ಥೆಗಳು ಈಗಾಗಲೇ ಅನೇಕ ಕೋರಿಕೆಗಳನ್ನು ಸಲ್ಲಿಸಿದ್ದಾರೆ.
ಈ ಹಾರನಾಸುರನನ್ನು ವಧೆ ಮಾಡಲು ತಮಗೆಲ್ಲ ಈಗಾಗಲೇ ಶ್ರೇಷ್ಠ ನ್ಯಾಯಾಲಯ ಬೇಕಾದ ಅಧಿಕಾರವನ್ನು ಪರಿಸರ ಮಾಲಿನ್ಯ ಕಾನೂನು, IMV act, ಪೋಲಿಸ್ ಕಾಯಿದೆ ಮೂಲಕ ಕೊಟ್ಟಿದ್ದಾರೆ. ತಾಳಬಹುದಾದ ಶಬ್ದ ಸೀಮೆಯನ್ನು ೪೫-೬೫ ಡಿ ಬಿ ಎಂದು ನಿರ್ಧರಿಸಿದ್ದಾರೆ.
ಇದರ ಮೂಲಕ ತಾವು ಬೇಕಾದ ಕ್ರಮಗಳನ್ನು ಜಾರಿಗೊಳಿಸಲು ಬೇಕಾದ ಲಿಖಿತ ಆಜ್ಞೆಗಳಿಂದ ತತ್ ಕ್ಷಣ ಹೊರಡಿಸಲು ಏನೂ ಅಡ್ಡಿ ಆತಂಕಗಳಿಲ್ಲ.
ಕೇವಲ ತಮ್ಮ ಸಂಕಲ್ಪ ಮತ್ತು ಇಚ್ಛೆ ಬೇಕಾಗಿದೆ. ದಯವಿಟ್ಟು ತೋರಿಸಿ.
೨) ವಾಹನಾಸುರನ ಇತರ ಮಾರಣಾಂತಿಕ, ಹಾನಿಕಾರಕ ದೌರ್ಜನ್ಯಗಳು:
ಅಪ್ರಾಪ್ತ ವಯಸ್ಕ ವಾಹನ ಚಾಲನೆ,ಜೀಬ್ರ, ರಸ್ತೆ ಬದಿ ಹಾಗು ಜಂಕ್ಷನ್ಗಳಲ್ಲಿ ಪಾದಚಾರಿಗಳ ಹಕ್ಕುಗಳ ಉಲ್ಲಂಘನೆ, ಕೆಂಪು ದೀಪ ಇರುವಾಗಲೇ ವಾಹನ ಚಾಲನೆ, ಅತಿ ಪ್ರಖರವಾದ ದೀಪಗಳು, ಉರಿಯದಿರುವ ಮುಖ್ಯ ,ಪಕ್ಕ,ತಿರುಗುವ ಚಿಹ್ನೆ, ಹಿಮ್ಬರುವ ದೀಪಗಳು, ಬೇಕೆಂದೇ ಗುರುತಿಸಬಾರದೆಂಬ ಕಪ್ಪು ಗಾಜು,
ಮತ್ತು ಒದಲಾಗದಂತಹ ನಶಿಸಿರುವ, ಪ್ರತಿಬಿಂಬಿಸುವ ನಂಬರ್ ಪ್ಲೇಟ್ಗಳು ಹೇರಳವಾಗಿ ಕಾಣುತ್ತವೆ. ಇವುಗಳನ್ನೆಲ್ಲಾ ಹಿಡಿದು ಜುಲ್ಮಾನೆ ಅಥವಾ ದಂಡಿಸುವ ಚೈತನ್ಯ ಸಿಬ್ಬಂದಿಯ ಕೊರತೆಯಿಂದ ನಿಮಗಿಲ್ಲವಾಗಿದೆ . ನೀವು ಆದ್ದರಿಂದ ಪ್ರಜೆಗಳು ಕೊಡುವ ದೂರುಗಳನ್ನು ತೊಂದರೆಗಳೆಂದು ಪರಿಣಿಸದೆ ರಾಜ್ಯ ಮತ್ತು ದೇಶವನ್ನು ಉದ್ಧರಿಸುವ ಇಚ್ಚೆಯೆಂದು ಆದರಿಸಿ ನಿಮ್ಮ ಕೆಲಸದ ,ನಿರ್ವಹಣೆಯಲ್ಲಿ, ದೇಶ ಸೇವೆಯಲ್ಲಿ ಸಹಭಾಗಿಗಳನ್ನಾಗಿ ಮಾಡಿಕೊಳ್ಳಿ ಎಂದು ಕೇಳುವ
ತಮ್ಮ ವಿಶ್ವಾಸಿ,
ಎಂ ಬಿ ನಟರಾಜ್,ಎಂಎಸ್, (ಜಾರ್ಜ್ಟೌನ್ ಯೂನಿವರ್ಸಿಟಿ, ವಾಶಿಂಗ್ಟನ್ , ಡಿಸಿ) ಎಂ ಟಿ (ಅಮೆರಿಕನ್ ಮೆಡಿಕಲ್ ಟೆಕ್ನಾಲಜಿ ಸ್ತ್ಸ್) ಯೂಎಸೆಸೂಕ್ಷ್ಮ ಜೀವಾಣು ಶಾಸ್ತ್ರಜ್ಞ - ವೈದ್ಯಕೀಯ ತಂತ್ರಜ್ಞ

0 Comments:

Post a Comment

<< Home