kaaverida kaaveri vivaada-8feb07
ಕಾವೇರಿದ ಕಾವೇರಿ ವಿವಾದ, ನನ್ನ ಅನಿಸಿಕೆ.
ಮಾನ್ಯರೇ,ದೇಶದ ನೈಸರ್ಗಿಕ ಸ೦ಪನ್ಮೂಲಗಳು, ಎಲ್ಲಾದರು ಇರಲಿ, ಎ೦ತಾದರು ಇರಲಿ, ಎಲ್ಲಾ ಭಾರತೀಯರ, ಜನ್ಮಸಿದ್ಧ ಸಮಾನ ಹಕ್ಕು.ಅವುಗಳು, ಗತಿ, ಮಿತಿಯಿಲ್ಲದ ಅಕ್ಷಯ ಸಿರಿಗಳಲ್ಲ. ಕಾಲೀನ, ವಾರ್ಷಿಕ ಏರು ಪೇರುಗಳಿಗೆ ಒಳಪಟ್ಟಿರುವ, ಸ೦ಗತಿಗಳನ್ನು, ನಮ್ಮ ಅಪೇಕ್ಷೆಗಳಿ೦ದ ನಿರ್ದೇಶಿಸಲು ಸಾಧ್ಯವಿಲ್ಲ.ಅವು, ಎಲ್ಲಾ ಮಕ್ಕಳಿಗೂ,ಇತ್ತೀಚಿನ ಭಾರತೀಯ ಸ೦ವಿಧಾನದ ಕಾನೂನಿನ ಪ್ರಕಾರ, ತ೦ದೆ, ತಾಯಿಯ ಆಸ್ತಿಯಲ್ಲಿ, ಸಮ ಪಾಲಿದ್ದ೦ತೆ.ನಾವು , ನಾವುಗಳು ಶಾ೦ತಿ, ಸ೦ಯಮತೆ, ಭ್ರಾತ್ರು ಭಾವದಿ೦ದ, ಸ್ರುಜನ ಶೀಲತೆಯಿ೦ದ ಅದನ್ನು ವಿಭಜಿಸಿ ಉಪಯೋಗಿಸಿಕೊಳ್ಳುವಸಾಮರ್ಥ್ಯವನ್ನು, ಸ್ವಾತ೦ತ್ರೋತ್ತರ, ೬೦ ವರ್ಷಗಳ ನ೦ತರವೂ ಪಡೆದ೦ತೆ ಕಾಣಿಸುತ್ತಿಲ್ಲ.ಒ೦ದು ವೇಳೆ, ಮಕ್ಕಳಿಗೆ,ಸಮ ಭಾಗಿತ್ವ ಸಾಮರ್ಥ್ಯವಿಲ್ಲದಿದ್ದಲ್ಲಿ, ಅದನ್ನು ಕಾಯುವುದು, ಪೋಷಕರ ಸ್ಥಾನದಲ್ಲಿರುವ ಸರ್ಕಾರದ, ರಾಜಕೀಯ ಮುಖ೦ಡರುಗಳ ಮತ್ತು ಪಕ್ಷಗಳ, ಪ್ರಥಮ ಮತ್ತು ಆದ್ಯ ಕರ್ತವ್ಯ.ಈ ಗರುತರ ಕಾರ್ಯ, ಈ ಅಪಕ್ವ ಗು೦ಪಿನಿ೦ದಲೇ, ಮತ ಪೆಟ್ಟಿಗೆಗಳಲ್ಲಿ ಜನಿಸಿ, ಉದ್ಧಾರವಾಗಿ, ಅದಕ್ಕೇ ಅನ್ನ್ಯಾಯ ಬಗೆಯುತ್ತಿರುವರಾಜಕಾರಣಿಗಳ ಕೈಯ್ಯಲ್ಲಿ ಆಗುವ೦ತೆ ಕಾಣುತ್ತಿಲ್ಲ.ಅವರಿಗೆ, ಅವರ ಪಕ್ಷಗಳ, ಜಾತೀಯತೆಯ, ಪ್ರಾ೦ತೀಯತೆಯ ಕಗ್ಗ೦ಟುಗಳಿ೦ದ ಬಿಡಿಸಿಕೊ೦ಡು ದೇಶದ ಸಮಗ್ರ ಅಭಿವ್ರುದ್ಧಿಯತ್ತೆ ನಡೆಸುವನೈಪುಣ್ಯತೆಯ೦ತೂ ಕ೦ಡು ಬರುವ ಸೂಚನೆಯೇ ಎಲ್ಲೂ ಇಲ್ಲ.ಇನ್ನೂ, ಎಲ್ಲೋ ಅಲ್ಲಲ್ಲಿ ಉಳಿದುಕೊ೦ಡಿರುವ ಅಲ್ಪ ಸ್ವಲ್ಪ ದೇಶ ಭಕ್ತಿ, ಭಾರತೀಯತೆಯ೦ತ ಉದಾತ್ತ ಮನೋಭಾವಗಳನ್ನೂ ಅಳಿಸಿ, ನಿರ್ನಾಮ ಮಾಡಿ, ತಮ್ಮ ತಮ್ಮ ಸ್ವಾರ್ಥಿಕ ಉದ್ದೇಶಗಳನ್ನೇ ಅರಸಿಕೊ೦ಡು ಹೋಗುತ್ತಿರುವುದು, ಭಾರತದ ಮತ್ತು ನಮ್ಮ ದುರಾದ್ರುಷ್ಟ.
ಈಗ, ತುರ್ತಾಗಿ ಜನಗಳಿಗೆ, ಬೇಕಾಗಿರುವುದು, ಶಾ೦ತಿ, ಅನುದ್ವಿಗ್ನತೆ. ಈ ಸಮಯದಲ್ಲಿ, ಕ೦ಡು ಬರುವ, ಸಾಮೂಹಿಕ ಉದ್ರೇಕ, ಉದ್ವೇಗಗಳನ್ನು, ಒತ್ತಿಕ್ಕಿ, ತಡೆಗಟ್ಟಿ ಜನಗಳಲ್ಲಿ, ಅಕ್ಕ ಪಕ್ಕದವರಲ್ಲಿ, ಸೌಹಾರ್ದತೆಯೊ೦ದಿಗೆ ಬದುಕಿ ಬಾಳುವ ಮನೋಭಾವವನ್ನು ರಾಜಕಾರಣಿಗಳು ಪ್ರೋತ್ಸಾಹಿಸ ಬೇಕು.ಈ ದಿಸೆಯಲ್ಲಿ ಇನ್ನೂ ಉತ್ತಮ ಮಟ್ಟದ ಪ್ರೌಢತೆ ತೋರಿಸುವ ಆಕಾ೦ಕ್ಷೆ ಅವರಿಗೆ ಇದ್ದಲ್ಲಿ, ಇದುವರೆಗೆ ತೋರಿಸದಿರುವ ಅಸಾಧಾರಣ ಹೊಣೆಗಾರಿಕೆಯನ್ನು ಪ್ರದರ್ಶಿಸಬೇಕಾಗುತ್ತದೆ.
ಇದಕ್ಕೆ ತತ್ಕ್ಶಣ ಅವರಿಗೆ ಬೇಕಾಗಿರುವುದು, ಉದಾತ್ತ ತೆ, ಧ್ಯೇಯ ,ಪರಿಪಕ್ವತೆ.ಅವೆಲ್ಲವನ್ನೂ, ಅವರಿಗೆ ಅಪರಿಮಿತವಾಗಿ ಕೊಡಲೆ೦ದು ಭಗವ೦ತನಲ್ಲಿ ಪ್ರಾರ್ಥಿಸುತ್ತಿರುವ,ತಮ್ಮವ,

0 Comments:
Post a Comment
<< Home